ಆತ್ಮೀಯರೇ,
ಕುಂದಾಪುರ ತಾಲೂಕು ಸುಣ್ಣಾರಿ ಎನ್ನುವ ಗ್ರಾಮೀಣ ಭಾಗದಲ್ಲಿ ೨೦೧೨ರಲ್ಲಿ ಆರಂಭವಾದ ಈ ಎಕ್ಸಲೆಂಟ್ ಸಂಸ್ಥೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಕಲಿತು ಸಮಾಜದಲ್ಲಿ ಉತ್ತಮ ಸ್ಥಾನಮಾನಕ್ಕೆ ಹೋಗಲಿ ಎನ್ನುವ ಮಹಾದಾಸೆಯಿಂದ ಎಂ ಮಹೇಶ್ ಹೆಗ್ಡೆ ಹಾಗೂ ದೀಪಾ ಎಂ ಹೆಗ್ಡೆ ಅವರು ಕಟ್ಟಿದ ಸಂಸ್ಥೆ ಇದಾಗಿದೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಓದು ಬರಹದ ಜೊತೆಗೆ ಕಲೆ ಸಂಸ್ಕೃತಿ, ಕ್ರೀಡೆ ಬೇರೆ ಬೇರೆ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೂಡಿದ ವಿದ್ಯಾಭ್ಯಾಸ ನಮ್ಮದು. ಶೈಕ್ಷಣಿಕ ವಿಚಾರಕ್ಕೆ ಬಂದರೆ ಬೋರ್ಡ್ ಪಾಠದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ಪ್ರತಿ ದಿನದ ತರಗತಿಯಲ್ಲಿ ನಡೆಯುತ್ತಿರುತ್ತದೆ. ಇದಕ್ಕಾಗಿ ಇವತ್ತು ಎಕ್ಸಲೆಂಟ್ ಕುಂದಾಪುರ ಹತ್ತರ ಜೊತೆಗೆ ಹನ್ನೊಂದು ಆಗದೆ ತನ್ನದೇ ಆದ ಅಸ್ಥಿತ್ವವನ್ನ ಇಡೀ ರಾಜ್ಯದ್ಯಾದಂತ ವ್ಯಾಪಿಸಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಸಾಧಾರಣ ಫಲಿತಾಂಶ ಪಡೆದ ವಿದ್ಯಾರ್ಥಿಯೂ ಕೂಡ ನಮ್ಮ ಎಕ್ಸಲೆಂಟ್ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಒಬ್ಬ ರ‍್ಯಾಂಕ್ ವಿದ್ಯಾರ್ಥಿಯನ್ನಾಗಿ ಮಾಡಿರುವಂತದ್ದು ಎಕ್ಸಲೆಂಟ್‌ನ ದೊಡ್ಡ ಸಾಧನೆ. ಪ್ರತಿಯೊಂದು ವಿದ್ಯಾರ್ಥಿಗೂ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮದು. ಹಾಗೇ ಸಮಾಜಕ್ಕೆ ಉತ್ತಮ ನಾಗರಿಕರನ್ನ ರೂಪಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಈ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ.